WhatsApp Call

ನಾನು ಇಲ್ಲಿಂದ ಎಲ್ಲಿಗೆ ಹೋಗುವೆನು?

    ಬಿಡುಗಡೆಯಾದ ತಕ್ಷಣವೇ ನೀವು ಪುನಃ ನಿಜವಾದ ಪ್ರಪಂಚಕ್ಕೆ ಮರಳಿ ಹೋಗುವಿರಿ ಅದೇ ಹಿಂದಿನ ಪ್ರಪಂಚ ಮತ್ತು ಅದೇ ಹಿಂದಿನ ಸಮಸ್ಯೆಗಳು ನಿಮ್ಮ ಮುಂದೆ ಇರುತ್ತದೆ.

    ನೀವು ಯಾವುದೇ ಊರಿನಲ್ಲಿ ವಾಸವಾಗಿದ್ರು, ನಿಮ್ಮದೇ ಆದಂತಹ ಸಾಕಷ್ಟು ಸಮಸ್ಯೆಗಳು ಇನ್ನು ಇರುತ್ತವೆ. ಎಲ್ಲ ನಿಜವಾದ ಸಮಸ್ಯೆಗಳನ್ನು ಅತೀ ದೊಡ್ಡ ಸಮಸ್ಯೆಗಳೆಂದು ಅನಿಸುವಂತೆ ಮಾಡಬಲ್ಲ ಇನ್ನೊಂದು ಸಮಸ್ಯೆಯು ಸಹ ಇರುತ್ತದೆ.

    ಕೇವಲ ನೀವೊಬ್ಬರೇ ಕುಡಿತದ ಸಮಸ್ಯೆಗೆ ಒಳಗಾದವರಲ್ಲ. ನಮ್ಮಲ್ಲಿ 22,00,000ಕ್ಕೂ ಅಧಿಕ ಮಂದಿ ಒಡನಾಡಿತನದಲ್ಲಿದ್ದು, ಏಕಾಂಗಿತನದಿಂದ ಬಿಡುಗಡೆಯಾಗಿದ್ದೇವೆ.

    1935ನೆ ಇಸವಿಯಲ್ಲಿ ತಮ್ಮ ಜೀವನವನ್ನೇ ನಾಶಮಾಡಿ ದಂತಹ ಮದ್ಯಪಾನವನ್ನು ನಿಲ್ಲಿಸದಿದ್ದರೆ, ತಮ್ಮ ಸಾವು ಖಚಿತವೆಂದು ಇಬ್ಬರು ವ್ಯಕ್ತಿಗಳು ಕಂಡುಕೊಂಡರು. ಕುಡಿಯುವುದನ್ನು ಬಿಡಬೇಕೆಂಬ ಆಸೆ ಇತ್ತು. ಆದರೆ ಏಕಾಂಗಿಯಾಗಿ ಇದಿದ್ದರಿಂದ ಸಾಧ್ಯವಾಗಲಿಲ್ಲ.

    ಅವರ ಕುಟುಂಬಸ್ಥರು, ಮಿತ್ರರು ಹಾಗೂ ವೈದ್ಯರಿಂದಲು ಏನೂ ಮಾಡಲಾಗಲಿಲ್ಲ. ಯಾವುದೇ ವೈದ್ಯಕೀಯ ಚಿಕಿತ್ಸೆಯಿಂದಾಗಲಿ, ಯಾವುದೇ ವೈಯಕ್ತಿಕ ನಷ್ಟ ಅಥವಾ ದೊಡ್ಡದಾದ ದುರ್ಘಟನೆ ಗಳಿಂದಾಗಲೀ, ಇನ್ನಿತರ ಭಯದಿಂದಾಗಲಿ ಅವರಿಂದ ಕುಡಿಯುವುದನ್ನು ನಿಲ್ಲಿಸಲಾಗಲಿಲ್ಲ. ದೃಢ ಮನಸ್ಸು, ಆತ್ಮಶಕ್ತಿಯಿಂದಲೂ ಅವರಿಂದ ಕುಡಿಯುವುದನ್ನು ನಿಲ್ಲಿಸಲಾಗಲಿಲ್ಲ. ಇನ್ನು ಮುಂದೆ ಕುಡಿಯುವುದಿಲ್ಲವೆಂದು ಲೆಕ್ಕವಿಲ್ಲದಷ್ಟು ಸಲ ತಮ್ಮಲೇ ಮೂಡಿದ ಪ್ರಾಮಾಣಿಕ ಶಪಥಗಳನ್ನು ಮುರಿದು, ಮೊದಲ ಗುಟುಕು ಶರಾಬಿಗೆ ಮರಳಿದರು.

    ಇವರಿಬ್ಬರು ಪರಸ್ಪರ ತಮ್ಮ ಭೇಟಿಯ ಮುಂಚೆಯೇ ಇವರಿಗೆ ತಾವು ಅಮಲು ರೋಗಿಗಳೆಂದು ಚಿಕಿತ್ಸೆಯಲ್ಲಿ ತಿಳಿಸಲಾಗಿತ್ತು ಅದಕ್ಕಿಂತ ಕೆಟ್ಟದೆಂದರೆ ಅವರು ತಮ್ಮಲ್ಲಿಯೇ ಭರವಸೆಯನ್ನು ಕಳೆದುಕೊಂಡಿದ್ದರು.

    ಕಾಕತಾಳೀಯವಾಗಿ ಅವರಿಬ್ಬರ ಆಶ್ಚರ್ಯಕರ ಭೇಟಿಯಾಯಿತು. ತಮ್ಮ ಮದ್ಯಪಾನದ ಸಾಮನ್ಯ ಅನುಭವವನ್ನು ಹಂಚಿಕೊಳ್ಳುವ ಅವರು ಆಗಿಂದಾಗ್ಗೆ ಸಂಧಿಸಿದರು. ಕುಟುಂಬದವರು ಸ್ನೇಹಿತರು ವೈದ್ಯರಿಗಿಂತಲೂ ಅತಿಯಾಗಿ ಪರಸ್ಪರ ತಮ್ಮ ಸಮಸ್ಯೆಯನ್ನು ಮೊದಲು ಅವರು ಅರಿತು ಕೊಂಡರು. ಮೊದಲ ಕುಡಿತದಿಂದ ದೂರವಿರಲು ಅವಶ್ಯಕವಾದ ಬಲ ಭರವಸೆಯನ್ನು ಪರಸ್ಪರರಲ್ಲಿ ಪಡೆದರು.

    ಅತಿ ಶೀಘ್ರದಲ್ಲಿ ತಮ್ಮ ಜೀವನ ಹಾಗೂ ಭವಿಷ್ಯದ ಬಗ್ಗೆ ಭರವಸೆಯನ್ನು ಹೊಂದಿ ಆಶಾರಹಿತರಾದ ಇತರ ಅಮಲು ರೋಗಿಗಳಿಗೆ ತಮ್ಮ ಅನುಭವವನ್ನು ಹಂಚಲು ಅವರು ಬದುಕಿ ಉಳಿದರು.

    ಒಂದು ಕಾಲದಲ್ಲಿ ಆಶಾರಹಿತ ಅಮಲು ರೋಗಿಗಳಿಗೊಂದು ಅಂದಾಜಿನಲ್ಲಿ 20,00,000 ಕ್ಕೂ ಮೀರಿದ ಪುರುಷರು ಹಾಗೂ ಸ್ತ್ರೀಯರು ಇಂದಿನ ದಿನ ಆಲೊಹಾಲಿಕ್ಸ್ ಅನಾನಿಮಸ್ ಒಡನಾಡಿತನ ದಲ್ಲಿದ್ದಾರೆ. ತಮ್ಮ ಅನುಭವ, ಬಲ ಮತ್ತು ಭರವಸೆಯನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ನಾವು ಇಂದಿಗೂ ನಿರಂತರವಾಗಿ ಭೇಟಿ ಯಾಗುತ್ತೇವೆ. ಹಿಂದಿಗಿಂತಲೂ ನಮ್ಮ ದೈನಂದಿನ, ಜೀವನದಲ್ಲಿ ಬಹಳಷ್ಟು ಪ್ರಗತಿಯಾಗಿದೆ. ಸಮಾಧಾನ, ಸಂತೋಷವಿದೆ; ಒಂದು ಕಾಲದಲ್ಲಿ ನಾವು ಸಹ ಕೇಳುತ್ತಿದ್ದ ಪ್ರಶ್ನೆ: "ನಾನು ಇಲ್ಲಿಂದ ಎಲ್ಲಿಗೆ ಹೋಗುವೆನು?"

Contact US

Our Location



ನಮ್ಮ ಬಗ್ಗೆ

ನಾವು ಬದುಕಿ, ಪ್ರತಿದಿನ ಎಲ್ಲಾ ಸ್ಥಳಗಳಲ್ಲಿ ಭೇಟಿಯಾಗುತ್ತೇವೆ. ಬಿಡುಗಡೆಯಾದ ಬಳಿಕ ನಮ್ಮಲ್ಲಿರುವ ಯಾರಾದರೂ ಸದಸ್ಯರೊಡನೆ ನೀವು ಮಾತನಾಡಲು ಆಶಿಸುತ್ತೀರಿ ಎಂದು ನಾವು ಬಯಸುತ್ತೇವೆ. ನಮಗೆ ಯಾರೋ ಒಬ್ಬರು ಕಾದಿದ್ದರು, ನಾವು ನಿಮಗಾಗಿ ಕಾಯುತ್ತಿರುವೆವು. ಅಷ್ಟೇ ವ್ಯತ್ಯಾಸ.

ALL CONTACTS

ಆಲ್ಕೊಹಾಲಿಕ್ಸ್ ಅನಾನಿಮಸ್ ಮೈಸೂರು
Regional Office: ಆಶ್ರಯ # 02,
ಸೇಂಟ್ ಫಿಲೋಮಿನಾ ಬೋರ್ಡಿಂಗ್ ಹೌಸ್ ಕ್ಯಾಂಪಸ್ ಲೌರ್ಡ್ ನಗರ,
ಬಿ.ಎನ್. ರಸ್ತೆ, ಮೈಸೂರು - 01

+91 9008948589

aamysoreintergroup76@gmail.com

© Copyright 2025 Alcoholics Anonymous Mysore. All rights reserved