ಎ ಎ ಯಾ 12 ಪರಂಪರೆಗಳು
1. ನಮ್ಮೆಲ್ಲರ ಸಾಮೂಹಿಕ ಹಿತಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ವೈಯಕ್ತಿಕ ಚೇತರಿಯು ಎ.ಎ ಒಗ್ಗಟ್ಟನ್ನು ಅವಲಂಭಿಸಿದೆ.
2. ನಮ್ಮ ಸಾಮೂಹಿಕ ವಿವೇಚನ ಶಕ್ತಿಯಲ್ಲಿ ಸ್ವಯಂ ವ್ಯಕ್ತನಾಗುವ ಪ್ರೇಮಮಯ ಭಗವಂತನೇ ನಮ್ಮ ಪಂಗಡದ ಅಂತಿಮ ಅಧಿಕಾರಿಯಾಗಿರುತ್ತಾನೆ. ನಮ್ಮ ಮುಂದಾಳುಗಳು ಕೇವಲ ನಂಬಿಗಸ್ಥ ಸೇವಕರು. ಅವರು ಅಧಿಕಾರ ನಡೆಸುವುದಿಲ್ಲ.
3. ಮದ್ಯ ಸೇವನೆಯನ್ನು ನಿಲ್ಲಿಸುವ ಬಯಕೆಯೇ ಎ.ಎ ಸದಸ್ಯರಾಗಲು ಬೇಕಾದ ಏಕಮಾತ್ರ ಅವಶ್ಯಕತೆಯಾಗಿದೆ.
4. ಇತರ ಎ.ಎ ಪಂಗಡಗಳಿಗೆ ಅಥವಾ ಸಮಗ್ರ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯಕ್ಕೆ ಬಾಧಕವಾಗುವ ವಿಚಾರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಚಾರಗಳಲ್ಲಿ ಪ್ರತಿಯೊಂದು ಎ.ಎ ಪಂಗಡವೂ ಸ್ವಾಯತ್ತತೆ ಹೊಂದಿರುತ್ತದೆ.
5. ಈಗಲೂ ಮದ್ಯಪಾನ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಎ.ಎ ಸಂದೇಶವನ್ನು ತಲುಪಿಸುವುದು ಪ್ರತಿಯೊಂದು ಪಂಗಡದ ಪ್ರಾಥಮಿಕ ಉದ್ದೇಶವಾಗಿದೆ.
6. ಯಾವುದೇ ಎ.ಎ ಪಂಗಡವು ಸಂಬಂಧಿತ ಸೌಕರ್ಯಗಳಿಗೆ ಅಥವಾ ಹೊರಗಿನ ಉದ್ಯಮಗಳಿಗೆ ಸಮ್ಮತಿಯನ್ನಾಗಲಿ, ಆರ್ಥಿಕ ಸಹಕಾರವನ್ನಾಗಲಿ ಅಥವಾ ಎ.ಎ ಹೆಸರನ್ನಾಗಲಿ ನೀಡಬಾರದು ಯಾಕೆಂದರೆ ಧನ, ಸಂಪತ್ತು ಮತ್ತು ಪ್ರತಿಷ್ಟೆಯ ಸಮಸ್ಯೆಗಳು ನಮ್ಮನ್ನು ಪ್ರಾಥಮಿಕ ಉದ್ದೇಶದಿಂದ ವಿಚಲಿತಗೊಳಿಸುತ್ತವೆ.
7. ಹೊರಗಿನವರ ದೇಣಿಗೆಗಳನ್ನು ನಿರಾಕರಿಸಿ ಪ್ರತಿಯೊಂದು ಎ.ಎ ಪಂಗಡವು ಸಂಪೂರ್ಣ ಸ್ವಾವಲಂಬಿಯಾಗಿರಬೇಕು.
8.ಎ.ಎಯು ಎಂದಿಗೂ ವೃತ್ತಿಪರವಾಗಿರಬಾರದು. ಆದರೆ ನಮ್ಮ ಸೇವಾ ಕೇಂದ್ರಗಳು ವಿಶೇಷ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದು.
9. ಪ್ರಸ್ತುತ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯ ಯಾವತ್ತೂ ಸಂಘಟಿಸಲ್ಪಡಬಾರದು. ಆದರೆ ಯಾರು ಸೇವೆಯನ್ನು ಮಾಡುತ್ತೇರೋ ಅವರಿಗೆ ಪ್ರತ್ಯೇಕ ಜವಾಬ್ದಾರರಾದ ಸೇವಾ ಮಂಡಳಿಗಳನ್ನು ಅಥವಾ ಸಮಿತಿಗಳನ್ನು ನಾವು ರಚಿಸಬಹುದು.
10. ಎ.ಎಯು ಹೊರಗಿನ ವಿಷಯಗಳಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಆದುದರಿಂದ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯದ ಹೆಸರನ್ನು ಸಾರ್ವಜನಿಕ ವಿವಾದಗಳಲ್ಲಿ ಎಂದಿಗೂ ಎಳೆಯಬಾರದು.
11. ನಮ್ಮ ಸಾರ್ವಜನಿಕ ಸಂಪರ್ಕ ನೀತಿಯು ಪದೋನ್ನತಿಗಿಂತಲೂ ಆಕರ್ಷಣೆಯನ್ನು ಆದರಿಸಿಕೊಂಡಿದೆ. ಪತ್ರಿಕೆ ರೇಡಿಯೋ ಮತ್ತು ಚಲನಚಿತ್ರ ಮಟ್ಟದಲ್ಲಿ ನಾವು ಸದಾ ನಮ್ಮ ಅನಾಮಿಕತೆಯನ್ನು ತಪ್ಪದೆ ಕಾಯ್ದುಕೊಳ್ಳಬೇಕು.
12. ಅನಾಮಿಕತೆಯು ನಮ್ಮೆಲ್ಲ ಪರಂಪರೆಗಳ ಆಧ್ಯಾತ್ಮಿಕ ತಳಹದಿಯಾಗಿದೆ ಹಾಗೂ ವ್ಯಕ್ತಿಗಳಿಗಿಂತ ತತ್ವಗಳು ಶ್ರೇಷ್ಠವಾಗಿ ಪರಿಗಣಿಸುವಂತೆ ಸದಾ ಜ್ಞಾಪಿಸುತ್ತದೆ.