Alcoholics Anonymous – Mysore

ನಾವು ಏನು ಮಾಡುತ್ತೇವೆ

ಆಲ್ಕೊಹಾಲಿಕ್ಸ್ ಅನಾನಿಮಸ್ ಏನು ಮಾಡುತ್ತದೆ

  • ಮುಕ್ತ ಸಭೆಗಳು: ಮದ್ಯಪಾನ ಮಾಡದ ಅತಿಥಿಗಳನ್ನು ಸ್ವಾಗತಿಸಿ

  • ಮುಚ್ಚಿದ ಸಭೆಗಳು: ಮದ್ಯವ್ಯಸನಿಗಳಿಗೆ ಅಥವಾ ತಮಗೆ ಕುಡಿಯುವ ಸಮಸ್ಯೆ ಇರಬಹುದು ಎಂದು ನಂಬುವವರಿಗೆ

AA ಸದಸ್ಯರು ಚೇತರಿಕೆಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಪ್ರಾಯೋಜಕತ್ವದ ಮೂಲಕ ಒಬ್ಬರಿಗೊಬ್ಬರು ಬೆಂಬಲವನ್ನು ನೀಡುತ್ತಾರೆ.

ಹನ್ನೆರಡು-ಹಂತದ ಕಾರ್ಯಕ್ರಮವು ಚೇತರಿಕೆಗೆ ರಚನಾತ್ಮಕ ಮಾರ್ಗವನ್ನು ಮತ್ತು ಮದ್ಯಪಾನ ಮುಕ್ತ ಜೀವನವನ್ನು ಒದಗಿಸುತ್ತದೆ.

ಆಲ್ಕೊಹಾಲಿಕ್ಸ್ ಅನಾನಿಮಸ್ ಏನು ಮಾಡುವುದಿಲ್ಲ

ನಮ್ಮ ಚೇತರಿಕೆಯು ಅನುಭವ, ಬೆಂಬಲ ಮತ್ತು ಭರವಸೆಯನ್ನು ಪರಸ್ಪರ ಹಂಚಿಕೊಳ್ಳುವುದರ ಮೇಲೆ ಆಧಾರಿತವಾಗಿದೆ, ಇದರಿಂದಾಗಿ ನಾವು ನಮ್ಮ ಸಾಮಾನ್ಯ ಸಮಸ್ಯೆಯನ್ನು ಪರಿಹರಿಸಬಹುದು; ಹೆಚ್ಚು ಮುಖ್ಯವಾಗಿ, ನಮ್ಮ ನಿರಂತರ ಸಮಚಿತ್ತತೆಯು ಇತರರು ಮದ್ಯಪಾನದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ.

ಆಲ್ಕೊಹಾಲಿಕ್ಸ್ ಅನಾನಿಮಸ್ 12 ಹಂತಗಳು ಮತ್ತು 12 ಸಂಪ್ರದಾಯಗಳು

  1. ಮದ್ಯದೆದರು ನಾವು ಬಲಹೀನರಾಗಿದ್ದವೆಂದೂ ಮತ್ತು ನಮ್ಮಜೀವನವು ನಿರ್ವಹಿಸಲಾರದಾಗಿತ್ತೆಂದೂ ನಾವು ಒಪ್ಪಿಕೊಂಡೆವು.

  2. ನಮಗಿಂತಲೂ ಮಿಗಿಲಾದ ಒಂದು ಶಕ್ತಿಯು ನಮ್ಮ ಚಿತ್ತ ಸ್ವಾಸ್ಥ್ಯವನ್ನು ಮರಳಿಕೊಡಬಲ್ಲುದೆಂದು ನಂಬಿದೆವು.

  3. ನಾವು ಅರ್ಥಮಾಡಿಕೊಂಡಂತಹ ಭಗವಂತನ ಪಾಲನೆಯಲ್ಲಿ ನಮ್ಮ ಸಂಕಲ್ಪ ಮತ್ತುಜೀವನವನ್ನುಒಪ್ಪಿಸಲು ನಿರ್ಧರಿಸಿದೆವು.

  1. ಶೋಧನಾತ್ಮಕವಾಗಿ ಮತ್ತು ನಿರ್ಭಯತೆಯಿಂದ ನಮ್ಮ ನೈತಿಕ ತಪಶೀಲನ್ನು ಮಾಡಿಕೊಂಡೆವು.

  1. ಭಗವಂತನೊಡನೆ, ನಮ್ಮೊಡನೆ ಮತ್ತು ಇನ್ನೊಬ್ಬ ಮಾನವನೊಡನೆ ನಮ್ಮ ನೈಜ ಸ್ವಭಾವದ ತಪ್ಪುಗಳನ್ನು ಒಪ್ಪಿಕೊಂಡೆವು.

  1. ನಮ್ಮ ಈ ಎಲ್ಲಾ ನಡತೆಯ ನ್ಯೂನತೆಗಳನ್ನೂ ದೇವರು ನಿವಾರಿಸಲನುಕೂಲವಾಗುವಂತೆ ಪೂರ್ಣವಾಗಿ ಸಿದ್ದರಾದೆವು.

  1. ನಮ್ಮ ಕೊರತೆಗಳನ್ನು ನಿವಾರಿಸುವಂತೆ ಭಗವಂತನನ್ನು ದೈನ್ಯದಿಂದ ಕೇಳಿಕೊಂಡೆವು.

  1. ನಾವು ಹಾನಿಪಡಿಸಿದ ಎಲ್ಲಾ ವ್ಯಕ್ತಿಗಳ ಯಾದಿಯನ್ನು ಮಾಡಿದೆವು ಮತ್ತು ಆ ಎಲ್ಲರೊಂದಿಗೆ ಪರಿಹಾರ ನೀಡಲು ಇಚ್ಚಿಸಿದೆವು.

  1. ಅವರಿಗೆ ಅಥವಾ ಇತರರಿಗೆ ಘಾಸಿಯಾಗುವ ಸಂದರ್ಭವನ್ನು ಹೊರತು ಸಾಧ್ಯವಿದ್ದಎಲ್ಲಾಅಂತಹ ವ್ಯಕ್ತಿಗಳೊಡನೆ ನೇರವಾಗಿ ತಪ್ರೊಪ್ಪಿಕೊಂಡೆವು.

  1. ವ್ಯಕ್ತಿಗತ ತಪಶೀಲನ್ನು ಮುಂದುವರಿಸಿದೆವು ಮತ್ತು ನಾವು ತಪ್ಪಿದಾಗ ಒಡನೆ ಅದನ್ನು ಒಪ್ಪಿಕೊಂಡೆವು.

  1. ಪ್ರಾರ್ಥನೆ ಮತ್ತುಧ್ಯಾನದ ಮೂಲಕ ನಮ್ಮ ಪ್ರಜ್ಞಾಪೂರ್ವಕ ಸಂಪರ್ಕವನ್ನು ನಾವು ಅರ್ಥ ಮಾಡಿಕೊಂಡಂತಹ ಭಗವಂತನೊಡನೆ ವೃದ್ಧಿಪಡಿಸುವಂತೆ ಕೋರುತ್ತಾ ಅವನ ಇಚ್ಛೆಯ ಜ್ಞಾನವನ್ನು ದಯಪಾಲಿಸಲೂ ಮತ್ತು ಅದನ್ನು ಕಾರ್ಯಗತಗೊಳಿಸುವ ಶಕ್ತಿಯನ್ನು ನಮಗೆ ನೀಡಲೂ ಪ್ರಾರ್ಥಿಸಿದೆವು.

  1. ಈ ಹೆಜ್ಜೆಗಳ ಪರಿಣಾಮವಾಗಿ ಆಧ್ಯಾತ್ಮಿಕ ಜಾಗೃತಿಯನ್ನು ಪಡೆದವರಾಗಿ ನಾವು ಈ ಸಂದೇಶವನ್ನು ಅಮಲಿಗಳಿಗೆ ತಲುಪಿಸಲು ಮತ್ತು ಈ ತತ್ವಗಳನ್ನು ನಮ್ಮೆಲ್ಲಾ ವ್ಯವಹಾರಗಳಲ್ಲಿ ಆಚರಿಸಲು ಯತ್ನಿಸಿದೆವು.
  1. ನಮ್ಮೆಲ್ಲರ ಸಾಮೂಹಿಕ ಹಿತಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ವೈಯಕ್ತಿಕ ಚೇತರಿಯು ಎ.ಎ ಒಗ್ಗಟ್ಟನ್ನು ಅವಲಂಭಿಸಿದೆ.

  2. ನಮ್ಮ ಸಾಮೂಹಿಕ ವಿವೇಚನ ಶಕ್ತಿಯಲ್ಲಿ ಸ್ವಯಂ ವ್ಯಕ್ತನಾಗುವ ಪ್ರೇಮಮಯ ಭಗವಂತನೇ ನಮ್ಮ ಪಂಗಡದ ಅಂತಿಮ ಅಧಿಕಾರಿಯಾಗಿರುತ್ತಾನೆ. ನಮ್ಮ ಮುಂದಾಳುಗಳು ಕೇವಲ ನಂಬಿಗಸ್ಥ ಸೇವಕರು. ಅವರು ಅಧಿಕಾರ ನಡೆಸುವುದಿಲ್ಲ.

  3. ಮದ್ಯ ಸೇವನೆಯನ್ನು ನಿಲ್ಲಿಸುವ ಬಯಕೆಯೇ ಎ.ಎ ಸದಸ್ಯರಾಗಲು ಬೇಕಾದ ಏಕಮಾತ್ರ ಅವಶ್ಯಕತೆಯಾಗಿದೆ.

  4. ಇತರ ಎ.ಎ ಪಂಗಡಗಳಿಗೆ ಅಥವಾ ಸಮಗ್ರ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯಕ್ಕೆ ಬಾಧಕವಾಗುವ ವಿಚಾರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಚಾರಗಳಲ್ಲಿ ಪ್ರತಿಯೊಂದು ಎ.ಎ ಪಂಗಡವೂ ಸ್ವಾಯತ್ತತೆ ಹೊಂದಿರುತ್ತದೆ.

  5. ಈಗಲೂ ಮದ್ಯಪಾನ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಎ.ಎ ಸಂದೇಶವನ್ನು ತಲುಪಿಸುವುದು ಪ್ರತಿಯೊಂದು ಪಂಗಡದ ಪ್ರಾಥಮಿಕ ಉದ್ದೇಶವಾಗಿದೆ.

  6. ಯಾವುದೇ ಎ.ಎ ಪಂಗಡವು ಸಂಬಂಧಿತ ಸೌಕರ್ಯಗಳಿಗೆ ಅಥವಾ ಹೊರಗಿನ ಉದ್ಯಮಗಳಿಗೆ ಸಮ್ಮತಿಯನ್ನಾಗಲಿ, ಆರ್ಥಿಕ ಸಹಕಾರವನ್ನಾಗಲಿ ಅಥವಾ ಎ.ಎ ಹೆಸರನ್ನಾಗಲಿ ನೀಡಬಾರದು ಯಾಕೆಂದರೆ ಧನ, ಸಂಪತ್ತು ಮತ್ತು ಪ್ರತಿಷ್ಟೆಯ ಸಮಸ್ಯೆಗಳು ನಮ್ಮನ್ನು ಪ್ರಾಥಮಿಕ ಉದ್ದೇಶದಿಂದ ವಿಚಲಿತಗೊಳಿಸುತ್ತವೆ.

  7. ಹೊರಗಿನವರ ದೇಣಿಗೆಗಳನ್ನು ನಿರಾಕರಿಸಿ ಪ್ರತಿಯೊಂದು ಎ.ಎ ಪಂಗಡವು ಸಂಪೂರ್ಣ ಸ್ವಾವಲಂಬಿಯಾಗಿರಬೇಕು.

  8. ಎ.ಎಯು ಎಂದಿಗೂ ವೃತ್ತಿಪರವಾಗಿರಬಾರದು. ಆದರೆ ನಮ್ಮ ಸೇವಾ ಕೇಂದ್ರಗಳು ವಿಶೇಷ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದು.

  9. ಪ್ರಸ್ತುತ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯ ಯಾವತ್ತೂ ಸಂಘಟಿಸಲ್ಪಡಬಾರದು. ಆದರೆ ಯಾರು ಸೇವೆಯನ್ನು ಮಾಡುತ್ತೇರೋ ಅವರಿಗೆ ಪ್ರತ್ಯೇಕ ಜವಾಬ್ದಾರರಾದ ಸೇವಾ ಮಂಡಳಿಗಳನ್ನು ಅಥವಾ ಸಮಿತಿಗಳನ್ನು ನಾವು ರಚಿಸಬಹುದು.

  10. ಎ.ಎಯು ಹೊರಗಿನ ವಿಷಯಗಳಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಆದುದರಿಂದ ಅನಾಮಿಕ ಮದ್ಯ ರೋಗಿಗಳ ಬಾಂಧವ್ಯದ ಹೆಸರನ್ನು ಸಾರ್ವಜನಿಕ ವಿವಾದಗಳಲ್ಲಿ ಎಂದಿಗೂ ಎಳೆಯಬಾರದು.

  11. ನಮ್ಮ ಸಾರ್ವಜನಿಕ ಸಂಪರ್ಕ ನೀತಿಯು ಪದೋನ್ನತಿಗಿಂತಲೂ ಆಕರ್ಷಣೆಯನ್ನು ಆದರಿಸಿಕೊಂಡಿದೆ. ಪತ್ರಿಕೆ ರೇಡಿಯೋ ಮತ್ತು ಚಲನಚಿತ್ರ ಮಟ್ಟದಲ್ಲಿ ನಾವು ಸದಾ ನಮ್ಮ ಅನಾಮಿಕತೆಯನ್ನು ತಪ್ಪದೆ ಕಾಯ್ದುಕೊಳ್ಳಬೇಕು.

  12. ಅನಾಮಿಕತೆಯು ನಮ್ಮೆಲ್ಲ ಪರಂಪರೆಗಳ ಆಧ್ಯಾತ್ಮಿಕ ತಳಹದಿಯಾಗಿದೆ ಹಾಗೂ ವ್ಯಕ್ತಿಗಳಿಗಿಂತ ತತ್ವಗಳು ಶ್ರೇಷ್ಠವಾಗಿ ಪರಿಗಣಿಸುವಂತೆ ಸದಾ ಜ್ಞಾಪಿಸುತ್ತದೆ.
ಸಹಾಯವಾಣಿ