ಆಲ್ಕೊಹಾಲಿಕ್ಸ್ ಅನಾನಿಮಸ್ ಎಂಬ ಸಂಸ್ಥೆಯಲ್ಲಿ ಜನರು ತಮ್ಮ ಅನುಭವ, ಬೆಂಬಲ, ಭರವಸೆಯನ್ನು ಪರಸ್ಪರ ಹಂಚಿಕೊಳ್ಳುತ್ತ ತಮ್ಮೆಲರ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಮಾತ್ರವಲ್ಲದೆ ಇತರ ಅಮಲು ರೋಗಿಗಳು ರೋಗಗಿಂದ ಚೇತರಿಸಿಕೊಳ್ಳಲು ನೆರವಾಗುತ್ತಾರೆ. ಸದಸ್ಯತ್ವದ ಒಂದೇ ಅವಶ್ಯಕತೆಎಂದರೆ ಮದ್ಯಪಾನವನ್ನು ನಿಲ್ಲಿಸುವ ಅಪೇಕ್ಷೆ, ಸದಸ್ಯತ್ವದ ಸಂದಾಯವಾಗಬೇಕಾದ ಬಾಕಿಯಾಗಲೀ, ಶುಲ್ಕವಾಗಲಿ ಇಲ್ಲ. ನಮ್ಮ ಸ್ವಂತ ಕೊಡುಗೆಗಳಿಂದ ವೆಚ್ಚವನ್ನು ನಿರ್ವಹಿಸಿಕೊಳ್ಳುತೇವೆ.
ಆಲ್ಕೊಹಾಲಿಕ್ಸ್ ಅನಾನಿಮಸ್ ಇತರ ಯಾವುದೇ ಪಂಥ, ಪಂಗಡ,ರಾಜಕೀಯ ವ್ಯವಹಾರ, ಸಂಸ್ಥೆ ಅಥವಾ ಸಂಘಟನೆಯೊಡನೆ ಸಂಬಂಧವನ್ನು ಹೊಂದಿಲ್ಲ;ಯಾವ ಬಗೆಯ ಚರ್ಚೆಯಲ್ಲಿ ತೊಡಗಲು ಬಯಸುವುದಿಲ್ಲ; ವಾದ ವಿವಾದಗಳಿಗೆ ಆಸ್ಪದಕೊಡುವುದಿಲ್ಲ.
ಮತ್ತೆ ಯಾವುದೇ ಧೈಯವನ್ನು ಸಮರ್ಥಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಚಿತ್ತಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮತ್ತು ಇತರ ಅಮಲು ರೋಗಿಗಳು ಮಾನಸಿಕ ಸ್ಥಿಮಿತತೆ ಪಡೆಯಲು ನೆರವಾಗುವುದು ನಮ್ಮ ಮುಖ್ಯ ಉದ್ದೇಶ.
ಆಲ್ಕೊಹಾಲಿಕ್ಸ್ ಅನಾನಿಮಸ್ (ಎ.ಎ.) ಒಂದು ವಿಶ್ವವ್ಯಾಪಿ ಯಾದ, ಜೀವನದ ಎಲ್ಲ ರಂಗಗಳ ಪುರುಷರು ಮತ್ತು ಸ್ತ್ರೀಯರು ಸ್ವಯಂಪ್ರೇರಿತರಾಗಿ ಅತಿಕುಡಿತದ ಬಗ್ಗೆ ಮನಸ್ಸಿನ ಸ್ಥಿಮಿತತೆಯನ್ನು ಸಾಧಿಸಿ, ಅದನ್ನು ಉಳಿಸಿಕೊಳ್ಳಲು ರಚಿಸಿಕೊಂಡಿರುವ ಒಂದು ಸ್ವ ಇಚ್ಛೆಯ ಸಹಯೋಗ, ಇದರ ಸದಸ್ಯತ್ವಕ್ಕೆ ಬೇಕಾಗಿರುವ ಒಂದೇ ಅರ್ಹತೆಯೆಂದರೆ ಕುಡಿತದ ಚಟದಿಂದ ಬಿಡುಗಡೆ ಹೊಂದುವ ಆಕಾಂಕ್ಷೆ. ಇದರ ಸದಸ್ಯತ್ವಕ್ಕೆ ಶುಲ್ಕವಿಲ್ಲ.
ಮೈಸೂರಿನಲ್ಲಿ ಸರಿಸುಮಾರು 19 ಎಎ ಗುಂಪುಗಳಿದ್ದು,ನಿಯಮಿತವಾಗಿ ಸಭೆಗಳು ನಡೆಯುತ್ತವೆ. ಎಎ ಸಭೆಗಳನ್ನು ದೇಶಾದ್ಯಂತ ನಡೆಸಲಾಗುತ್ತದೆ, ನೀವು ಎಲ್ಲೇ ಇದ್ದರೂ ನಿರಂತರ ಬೆಂಬಲವನ್ನು ನೀಡುತ್ತದೆ.
ಸದಸ್ಯರು ಸುರಕ್ಷಿತ, ಬೆಂಬಲಿತ ವಾತಾವರಣದಲ್ಲಿ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ
ಜನರು ದಿನನಿತ್ಯವೂ ಸಮಚಿತ್ತದಿಂದ ಇರಲು ಸಭೆಗಳು ಸಹಾಯ ಮಾಡುತ್ತವೆ.
ಸಹಾಯ ಬಯಸುವ ಯಾರಿಗಾದರೂ ಬೆಂಬಲವನ್ನು ಉಚಿತವಾಗಿ ನೀಡಲಾಗುತ್ತದೆ.